ಕೃಷಿ
ಜಿಲ್ಲಾ ಮಟ್ಟದಲ್ಲಿ ಕೃಷಿ ಇಲಾಖೆಯಲ್ಲಿ ಕೃಷಿ ಜಂಟಿ ನಿರ್ದೇಶಕರು ಮುಖ್ಯಸ್ಥರಾಗಿರುತ್ತಾರೆ.
ಕೃಷಿ ಉಪನಿರ್ದೇಶಕರು ಕೃಷಿ ಜಂಟಿ ನಿರ್ದೇಶಕರ ಅಧೀನ ಅಧಿಕಾರಿಗಳು ಆಗಿರುತ್ತಾರೆ. ಕಾಗತಿಯಲ್ಲಿ ಇರುವಕೃಷಿ ತರಬೇತಿ ಕೇಂದ್ರದಲ್ಲಿ ಜಿಲ್ಲೆಯ ಕೃಷಿಕ ಸಮುದಾಯದ ಸದಸ್ಯರು ಹಾಗೂ ಕೃಷಿ ಇಲಾಖೆಯ ವಿಸ್ತರಣಾ ಸಿಬ್ಬಂದಿಗೆ ಕೃಷಿ ತರಬೇತಿಯನ್ನು ನಡೆಸಲಾಗುತ್ತದೆ. ತಾಲ್ಲೂಕು ಮಟ್ಟದಲ್ಲಿ ಕೃಷಿ ಸಹಾಯಕ ನಿರ್ದೇಶಕರು ಇಲಾಖಾ ಮುಖ್ಯಸ್ಥರಾಗಿರುತ್ತಾರೆ. ಜಿಲ್ಲೆಯ 6 ತಾಲ್ಲೂಕುಗಳ ಕೃಷಿ ಆಡಳಿತವಿವರಗಳು ಈ ಕೆಳಗಿನಂತೆ ಇರುತ್ತವೆ.
ಮುಖ್ಯಸ್ಥರು | ಮೊಬೈಲ್ ನಂಬರ |
---|---|
ಕೃಷಿ ಜಂಟಿ ನಿರ್ದೇಶಕರು | 7259004828 |
ಕೃಷಿ ಉಪನಿರ್ದೇಶಕರು |
7259004868 |
ಸಹಾಯಕ ಕೃಷಿ ನಿರ್ದೇಶಕರು, ಬಾಗೇಪಲ್ಲಿ | 7259004832 |
ಸಹಾಯಕ ಕೃಷಿ ನಿರ್ದೇಶಕರು, ಚಿಕ್ಕಬಳ್ಳಾಪುರ | 7259004831 |
ಸಹಾಯಕ ಕೃಷಿ ನಿರ್ದೇಶಕರು, ಚಿಂತಾಮಣಿ | 7259004833 |
ಸಹಾಯಕ ಕೃಷಿ ನಿರ್ದೇಶಕರು, ಗೌರಿಬಿದನೂರು | 7259004835 |
ಸಹಾಯಕ ಕೃಷಿ ನಿರ್ದೇಶಕರು, ಗುಡಿಬಂಡೆ | 7259004834 |
ಸಹಾಯಕ ಕೃಷಿ ನಿರ್ದೇಶಕರು, ಶಿಡ್ಲಘಟ್ಟ | 7259004836 |
ಪ್ರತಿ ತಾಲ್ಲೂಕಿನಲ್ಲಿ ಸಹಾಯಕ ಕೃಷಿ ನಿರ್ದೇಶಕರ ಅಡಿಯಲ್ಲಿ ಕೃಷಿ ಅಧಿಕಾರಿ / ಸಹಾಯಕ ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರದ ಮುಖ್ಯಸ್ಥರು (ಆರ್ ಎಸ್ ಕೆ) ಕಾರ್ಯನಿರ್ವಹಿಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 26 ಆರ್.ಎಸ್.ಕೆ.ಗಳು ಇವೆ. ಕೃಷಿ ಇಲಾಖೆಯ ಕೇಂದ್ರ ಪ್ರಾಯೋಜಿತ ಯೋಜನೆಗಳ ಜೊತೆಗೆ ವಿವಿಧ ಜಿಲ್ಲೆ ಮತ್ತು ರಾಜ್ಯ ವಲಯ ಯೋಜನೆಗಳು ಕಾರ್ಯಾಚರಣೆಯಲ್ಲಿವೆ. ಸೀಡ್ಸ್, ಜಿಪ್ಸಮ್, ಜಿಂಕ್ ಸಲ್ಫೇಟ್, ಬೋರಾನ್, ಹಸಿರು ಗೊಬ್ಬರವನ್ನು, ಬೀಜಗಳು ಮತ್ತು ಕೃಷಿ ಯಂತ್ರೋಪಕರಣಗಳು, ಪವರ್ ಉಳುಮೆಯ ಪರಿಕರಗಳನ್ನು ಮತ್ತು ಹೈಟೆಕ್ ರೊಟೋವೇಟರ್ಸಗಳ ಬಗ್ಗೆ ಕೃಷಿಕರಿಗೆ ಅಗತ್ಯ ಮಾಹಿತಿ ಮತ್ತು ಕೌಶಲ್ಯವನ್ನು ನೀಡಲಾಗುತ್ತದೆ. ಬೇಸಾಯಗಾರರಿಗೆ ಡಿಸ್ಕ್ ಹ್ಯಾರೋಸ್ ಮತ್ತು ಸಸ್ಯ ಸಂರಕ್ಷಣಾ ರಾಸಾಯನಿಕಗಳು ಹಾಗೂ ಉಪಕರಣಗಳು, ಹನಿ ನೀರಾವರಿ ವ್ಯವಸ್ಥೆ ಮೈಕ್ರೋ ನೀರಾವರಿ ವ್ಯವಸ್ಥೆ ಸಿಂಪರಣೆ ಕಾರ್ಯಗಳನ್ನು ಕೈಗೂಳ್ಳಲಾಗುತ್ತದೆ. ಹಲವಾರು ಮಾಹಿತಿಗಳು ಈ ಯೋಜನೆಗಳ ಅಡಿಯಲ್ಲಿ ಲಭ್ಯವಿದ್ದು, ಉಪಕರಣಗಳಿಗೆ ಶೇ.50 ಸಬ್ಸಿಡಿ ಅಥವಾ ಗರಿಷ್ಠ ಸಬ್ಸಿಡಿ ಅವಕಾಶಗಳು ಇರುತ್ತವೆ.
ಯೋಜನೆಗಳು
ಯೋಜನೆ ಹೆಸರು | ಅರ್ಹತೆ |
---|---|
ಇಸೋಪಾಮ್ | ಎಲ್ಲಾ ರೈತರು |
ಮೈಕ್ರೋ ನೀರಾವರಿ | ಎಲ್ಲಾ ರೈತರು |
ಸಾವಯವ ಗೊಬ್ಬರ | ಎಲ್ಲಾ ರೈತರು |
ಮಣ್ಣಿನ ಫಲವತ್ತತೆ ವರ್ಧನೆಯು ಯೋಜನೆ | ಎಲ್ಲಾ ರೈತರು |
ಫಾರ್ಮ್ ಯಂತ್ರಗಳ ಯೋಜನೆ | ಎಲ್ಲಾ ರೈತರು |
ಸಬ್ಸಿಡಿ ಅಡಿಯಲ್ಲಿ ಬೀಜ ಹಂಚಿಕೆ | ಎಲ್ಲಾ ರೈತರು |
ಬೀಜ ಕೃಷಿ ಸಂಸ್ಕರಣ ಮತ್ತು ಪೋಸ್ಟ್ ಹಾರ್ವೆಸ್ಟ್ ಟೆಕ್ನಾಲಜಿ | ಎಲ್ಲಾ ರೈತರು |
ಉತ್ಪನ್ನಗಳು
ಉತ್ಪನ್ನ | ಹೆಕ್ಟೇರ್ ಪ್ರದೇಶದಲ್ಲಿ |
---|---|
ರಾಗಿ | 46323 |
ಮೆಕ್ಕೆ | 55869 |
ತೊಗರಿಬೇಳೆ | 4989 |
ಹಲಸಂದಿ | 1349 |
ಬೇಳೆಕಾಳುಗಳು | 5503 |
ಶೇಂಗಾ | 18672 |
ಇತರೆ ಎಣ್ಣೆ ಬೀಜಗಳು | 423 |