Close

ಇತಿಹಾಸ

ಚಿಕ್ಕಬಳ್ಳಾಪುರ ಪಟ್ಟಣದ ಹೆಸರು ಮೂಲವಾಗಿ ಚಿನ್ನ ಬಳ್ಳಾಪುರಂ ಆಗಿದ್ದು, ಇದು ತಮಿಳು ಅಥವಾ ತೆಲುಗು ಮೂಲದಿಂದ ಹುಟ್ಟಿಬಂದಿರುತ್ತದೆ. ಚಿನ್ನ ಎಂದರೆ “ಚಿಕ್ಕದು” ಎಂದು ಮತ್ತು ಬಲ್ಲಾ ಎಂದರೆ ಆಹಾರ ಧಾನ್ಯಗಳನ್ನು ಅಳೆಯುವ ಸಾಧನ ಎಂದು ಮತ್ತು ಪುರ ಎಂದರೆ “ಪಟ್ಟಣ” ಎಂಬ  ಅರ್ಥಗಳಿವೆ. ಜನಜನಿತವಾಗಿರುವ ಪುರಾಣದ ಪ್ರಕಾರ,  ಆವತಿಯ ಮಲ್ಲ ಬೈರೇಗೌಡರ ಪುತ್ರನಾದ ಮರಿಗೌಡರು ಒಂದು ದಿನ ಕೋಡಿ ಮಂಚೇನಹಳ್ಳಿ ಅರಣ್ಯ ಪ್ರದೇಶದಲ್ಲಿ ಬೇಟೆಯಾಡುವ ಸಂದರ್ಭದಲ್ಲಿ ಒಂದು ಅಪೂರ್ವ ದೃಶ್ಯವನ್ನು ನೋಡುತ್ತಾನೆ. ಸುಂದರ ಮೊಲವೂಂದು ಬೇಟೆಯಾಡುವ ನಾಯಿಗಳ ಮುಂದೆ ಭಯವಿಲ್ಲದೆ ನಿಂತಿರುವುದು ಕಂಡು ಬಂದಿತು. ಈ ದೃಶ್ಯವನ್ನು ನೋಡಿ ಆವೇಶಭರಿತರಾದ ರಾಜನು ಈ ಜಾಗ ಧೈರ್ಯವಂತರ ಪ್ರದೇಶವಾಗಿದೆ ಎಂದು ತಿಳಿಯುತ್ತಾನೆ. ಇದರಿಂದಾಗಿ ವಿಜಯನಗರ ಅರಸರ ಅನುಮತಿಯನ್ನು ಪಡೆದು ಈ ಸ್ಥಳದಲ್ಲಿ ಒಂದು ಕೋಟೆ ಮತ್ತು ನಗರವನ್ನು ನಿರ್ಮಾಣ ಮಾಡುತ್ತಾನೆ.  ಕಾಲಕ್ರಮೇಣ ಈ ನಗರ ಚಿಕ್ಕಬಳ್ಳಾಪುರವೆಂಬ ದೂಡ್ಡನಗರವಾಗಿ ಬೆಳೆಯುತ್ತದೆ.ಬಚ್ಚೇಗೌಡರ ಆಳ್ವಿಕೆಯ ಅವಧಿಯಲ್ಲಿ ಮೈಸೂರು ರಾಜರು ನಂದಿ ದುರ್ಗದ ಕೋಟೆಯ ಮೇಲೆ ಅಕ್ರಮಣ ನಡೆಸುತ್ತಾರೆ. ಆದರೆ ಮರಾಠರ ಮದ್ಯೆ ಪ್ರವೇಶದಿಂದ ಅಕ್ರಮಣವನ್ನು ಕೈಬಿಡುತ್ತಾರೆ. ಬಚ್ಚೇಗೌಡರ ನಂತರ ಅಧಿಕಾರಕ್ಕೆ ಬಂದ ದೂಡ್ಡಬೈರೇಗೌಡರು ಮೈಸೂರು ರಾಜರು ಈ ಮೊದಲೇ ವಶಪಡಿಸಿಕೊಂಡಿದ್ದ ಕೋಟೆಗಳ ವಲಯವನ್ನು ಪುನಃ ಅವರಿಂದ ಕಸಿದು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾನೆ.  1762 ರಲ್ಲಿ ಚಿಕ್ಕಪ್ಪನಾಯಕನ ಆಳ್ವಿಕೆಯ ಸಮಯದಲ್ಲಿ, ಹೈದರ್ ಅಲಿಯು ಮೂರು ತಿಂಗಳ ಕಾಲ ಅಕ್ರಮಿಸಿಕೊಳ್ಳುತ್ತಾನೆ. ಈ ಸಂದರ್ಭದಲ್ಲಿ ಚಿಕ್ಕಪ್ಪನಾಯಕನು ಹೈದರಾಲಿಗೆ  5 ಲಕ್ಷ ಪಗೋಡಗಳನ್ನು ಪಾವತಿಸಲು ಒಪ್ಪಿಕೊಂಡಾಗ ಹೈದರಾಲಿಯ ಸೇನೆಯನ್ನು ಹಿಂಪಡೆಯಲಾಯಿತು. ಆ ನಂತರ, ಆಂಧ್ರಪ್ರದೇಶದ ಗುತ್ತಿಯ ಮುರಾರಿರಾಯನ ಸಹಾಯದಿಂದ ಚಿಕ್ಕಪ್ಪ ನಾಯಕ ತನ್ನ ಅಧಿಕಾರವನ್ನು ಮರಳಿ ಪಡೆಯುತ್ತಾನೆ. ಈ ಸಂದರ್ಭದಲ್ಲಿ ಮುರಾರಿರಾಯನು ಅವರ ಚಿಕ್ಕಪ್ಪ ನಾಯಕ ಜೊತೆಗೆ ನಂದಿಬೆಟ್ಟದಲ್ಲಿ ಅಡಗಿಸಿಡುತ್ತಾನೆ. ತಕ್ಷಣವೇ ಹೈದರ್ ಅಲಿ ಚಿಕ್ಕಬಳ್ಳಾಪುರ ಮತ್ತು ಸುತ್ತಲ ಪ್ರದೇಶಗಳನ್ನು ಕೈವಶ ಮಾಡಿಕೊಂಡು ಚಿಕ್ಕನಾಯಕನನ್ನು ಬಂಧಿಸುತ್ತಾನೆ. ನಂತರ ಬ್ರಿಟೀಷ್ ನ ಲಾರ್ಡಕಾರ್ನ ವಾಲಿಸ್ ನ ಮಧ್ಯಪ್ರವೇಶದಿಂದಾಗಿ ಚಿಕ್ಕಬಳ್ಳಾಪುರವನ್ನು ನಾರಾಯಣಗೌಡನ ವಶಕ್ಕೆ ಕೂಡಲಾಗಿದೆ. ಕೆಲವು ಮೂಲಾಧಾರಗಳಂತೆ ಲಾರ್ಡಕಾರ್ನ ವಾಲಿಸ್ ನ ಚಿಕ್ಕಳ್ಳಾಪುರದಿಂದ 18 ಕಿ.ಮೀ. ದೂರದಲ್ಲಿರುವ ಪೆರೇಸಂದ್ರದ ಶಿವದೇವಾಲಯಕ್ಕೆ ಭೇಟಿ ನೀಡುತ್ತಾನೆ. ಬ್ರಿಟಿಷ್ ಆಧಾರಗಳಂತೆ ಪೆರೇಸಂದ್ರವು ಒಂದು ಅದ್ಭುತವಾದ  ಐತಿಹಾಸಿಕ ಹಿನ್ನೆಲೆಯನ್ನು ಹೂಂದಿದೆ ಎಂದ ರಹಸ್ಯವನ್ನು ತಿಳಿದ ಟಿಪ್ಪುಸುಲ್ತಾನ್ ಚಿಕ್ಕಬಳ್ಳಾಪುರವನ್ನು ಅಕ್ರಮಿಸಿಕೊಳ್ಳುತ್ತಾನೆ.1791 ರಲ್ಲಿ ಬ್ರಿಟಿಷ್ ಆಡಳಿತಾಧಿಕಾರಿಗಳು ನಂದಿಯನ್ನು ಅಕ್ರಮಿಸಿಕೊಂಡು ಅದರ ನಿರ್ವಹಣೆಯನ್ನು ನಾರಾಯಣಗೌಡರಿಗೆ ವಹಿಸುತ್ತಾರೆ. ಇದರಿಂದಾಗಿ ಬ್ರಿಟಿಷ್ ರು ಮತ್ತು ಟಿಪ್ಪುಸುಲ್ತಾನರ ನಡುವೆ ಹೋರಾಟ  ಆರಂಭವಾಗುತ್ತವೆ. ಈ ಸಂದರ್ಭದಲ್ಲಿ ನಾರಾಯಣಗೌಡನು  ಅಧಿಕಾರವನ್ನು ಕಳೆದುಕೊಳ್ಳುತ್ತಾನೆ, ನಂತರ ಬ್ರಿಟಿಷ್ ರು ಟಿಪ್ಪುಸುಲ್ತಾನನ್ನು ಸೋಲಿಸುತ್ತಾರೆ. ಚಿಕ್ಕಬಳ್ಳಾಪುರವು ಸಹ ಈಗ ಕರ್ನಾಟಕದ ಒಂದು ಭಾಗವಾಗಿರುವ  ಮೈಸೂರು ಒಡೆಯರ ಆಡಳಿತಕ್ಕೆ ಒಳಪಡುತ್ತದೆ.  ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆಯು 6 ತಾಲ್ಲೂಕುಗಳಾಗಿ ವಿಂಗಡಿಸಲಾಗಿದ್ದು, ಗೌರಿಬಿದನೂರು, ಗುಡಿಬಂಡೆ, ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ಮತ್ತು ಚಿಂತಾಮಣಿ ತಾಲ್ಲೂಕುಗಳು ಈ ಜಿಲ್ಲೆಯ ವ್ಯಾಪ್ತಿಗೆ ಒಳಗೂಂಡಿವೆ.