Close

ಜಿಲ್ಲೆಯ ಬಗ್ಗೆ

ಕರ್ನಾಟಕ ರಾಜ್ಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯು ಹೊಸದಾಗಿ ರಚಿಸಲಾದ ಜಿಲ್ಲೆಯಾಗಿದೆ. ಇದು ಅವಿಭಜಿತ ಕೋಲಾರ ಜಿಲ್ಲೆಯಿಂದ ದಿನಾಂಕ: 23.08.2007 ರಂದು ಸ್ವತಂತ್ರ ಜಿಲ್ಲೆಯಾಗಿ ರೂಪುಗೂಂಡಿರುತ್ತದೆ

ಗೌರಿಬಿದನೂರು

ಗೌರಿಬಿದನೂರು ಎಂಬ ಹೆಸರು ಘೋರಿ ಮತ್ತು ಬಿದನೂರು ಎಂಬ ಪದಗಳಿಂದ ಹುಟ್ಟಿಕೊಂಡಿದೆ- ಇದು ಹಳೆಯ ಮೈಸೂರು ರಾಜ್ಯದ ಪಟ್ಟಣಗಳಿಗೆ ಸಾಮಾನ್ಯ ಹೆಸರು. ಟಿಪ್ಪು ಸುಲ್ತಾನ್ ಅವರ ಕೆಲವು ಸೈನಿಕರು ಇಲ್ಲಿ ಸಮಾಧಿ ಮಾಡಿದ್ದಾರೆಂದು ಹೇಳಲಾಗಿದೆ. ಇವತ್ತು ಅವನಿಗೆ ನಿರ್ಮಿಸಿದ ಮಸೀದಿಯು ಕೆಲವು ಹಳೆಯ ಸಮಾಧಿಯೊಂದಿಗೆ ನಿಂತಿದೆ. ಗೌರಿಬಿದನೂರು ಎಂಬ ಹೆಸರು ಗೌರಿ ಎಂದರೆ ಹಿಂದೂ ದೇವತೆ ಮತ್ತು ಬಿದಾನೂರಿನಿಂದ ಬಂದಿದೆ ಎಂದು ಕೆಲವು ಇತರ ಮೂಲಗಳು ಸೂಚಿಸುತ್ತವೆ. ಬಹಳ ಹಿಂದೆಯೇ ಈ ಪಟ್ಟಣವು ಬಹಳಷ್ಟು ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಕ್ರೀಡೆಗಳ ಕೇಂದ್ರವಾಗಿದೆ. ಅತ್ಯಂತ ಹೆಚ್ಚು ಕಾಲದ ಪರಂಪರೆಯುಳ್ಳ ಆಚಾರ್ಯ ಪ್ರೌಢಶಾಲೆಯು ಅಸಂಖ್ಯಾತ ಪ್ರತಿಭಾವಂತ ವ್ಯಕ್ತಿಗಳನ್ನು ರೂಪಿಸಿದೆ. ಹೋಮಿ ಭಾಭಾ ಮತ್ತು ಮಹಾತ್ಮ ಗಾಂಧಿ ಅವರು ತಮ್ಮ ಬಾಲ್ಯದಲ್ಲಿ ಈ ಶಾಲೆಯನ್ನು ಭೇಟಿ ಮಾಡಿದ್ದು, ದೇಶದಲ್ಲಿ ಇದು ಒಂದು ಮಾದರಿ ಶಾಲೆ ಎಂದು ಹೆಸರಿಸಿದರು. ಡಾ|| ಎಚ್.ನರಸಿಂಹಯ್ಯ ಅವರು ಈ ತಾಲ್ಲೂಕಿನ ಹೂಸ್ಸೂರು ಎಂಬ ಹಳ್ಳಿಯಲ್ಲಿ ಜನಿಸಿದ್ದು, ವಿಶಿಷ್ಟ ಸಾಧನೆ ಮಾಡಿದ್ದಾರೆ. ಬಡ ಕುಟುಂಬದಲ್ಲಿ ಜನಿಸಿದ ಅವರು ತಮ್ಮ ಆರಂಭಿಕ ವರ್ಷಗಳಲ್ಲಿ ಅಕ್ಷರ ಕಲಿಯಲು ಹೆಣಗಾಡಿದರು, ಇವರು ಪರಿಶ್ರಮದಿಂದ ಬೆಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಯಾದರು. ಶಿಕ್ಷಣದ ಕಡೆಗೆ ಜನರನ್ನು ಕರೆದೊಯ್ಯುವ ಅವರ ಕನಸು ಅವರ ಸ್ವಂತ ಊರಿನ ಬಗ್ಗೆ ಇದ್ದು, ಅವರ ಪ್ರಯತ್ನಗಳಿಂದಾಗಿ ಇಂದು ಹೂಸ್ಸೂರಿನಲ್ಲಿ ಮಹಾತ್ಮಗಾಂಧಿ ಆದರ್ಶಗಳ ಒಂದು ಉತ್ತಮ ಪ್ರೌಢಶಾಲೆ ಹಾಗೂ “ಇನ್ಫೋಸಿಸ್ ಸೈನ್ಸ್ ಸೆಂಟರ್” ಅಸ್ತಿತ್ವದಲ್ಲಿರಲು ಕಾರಣವಾಗಿದೆ. ಇದರ ಜೂತೆಗೆ ವಿಶ್ವೇಶ್ವರಯ್ಯ ತಾಂತ್ರಿಕ ವಸ್ತು ಸಂಗ್ರಹಾಲಯವು ಈ ಗ್ರಾಮದಲ್ಲಿದ್ದು, ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳನ್ನು ಈ ಗ್ರಾಮಕ್ಕೆ ಭೇಟಿ ನೀಡಿ ಶೈಕ್ಷಣಿಕ ಲಾಭ ಪಡೆಯುತ್ತಿದ್ದಾರೆ. ವಿಜ್ಞಾನ ಕೇಂದ್ರವು ಹೂಸೂರಿನ ರಾಷ್ಟ್ರೀಯ ಪ್ರೌಢಶಾಲೆಯ ಆವರಣದಲ್ಲಿದೆ. ಹೂಸೂರು ಕರ್ನಾಟಕದಲ್ಲಿ ಪ್ರಥಮ ಸ್ವಸ್ಥ ಗ್ರಾಮವಾಗಿದ್ದು, ಈ ಯೋಜನೆಯಡಿ ರೂ. 1 ಕೋಟಿ ಹಣವನ್ನು ವೆಚ್ಚ ಮಾಡಿ ಅನೇಕ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಗುಡಿಬಂಡೆ

ಗುಡಿಬಂಡೆ ಪಟ್ಟಣವು ಚಿಕ್ಕಬಳ್ಳಾಪುರ ಜಿಲ್ಲೆಯ ಒಂದು ಪಟ್ಟಣ ಪಂಚಾಯತಿ ಆಗಿದೆ. 2001 ಭಾರತದ ಜನಗಣತಿ ಪ್ರಕಾರ ಗುಡಿಬಂಡೆಯು 8794 ಜನಸಂಖ್ಯೆ ಹೂಂದಿತ್ತು. ತಾಲ್ಲೂಕಿನ ಸಾಕ್ಷರತಾ ಪ್ರಮಾಣವು ಶೇ. 62 ರಷ್ಟಿದ್ದು, ರಾಷ್ಟ್ರೀಯ ಸರಾಸರಿ ಸಾಕ್ಷರತಾ ಪ್ರಮಾಣ 59.5 ಕ್ಕಿಂತ ಹೆಚ್ಚಾಗಿತ್ತು. ಗುಡಿಬಂಡೆ ಪಟ್ಟಣದ ಸಮೀಪ ಇರುವ ಆದೇಗಾರಹಳ್ಳಿಯು ಅತ್ಯಂತ ಸುಂದರ ಗ್ರಾಮವೆನಿಸಿದ್ದು, ಪೆರೇಸಂದ್ರ ಗ್ರಾಮಕ್ಕೆ ಸಮೀಪದಲ್ಲಿರುತ್ತದೆ. ಪೆರೇಸಂದ್ರ ಗ್ರಾಮವು ಚಕ್ಕುಲಿಗೆ ಹೆಸರುವಾಸಿಯಾಗಿದೆ. ಇದು ಒಂದು ಸಣ್ಣ ನದಿ ಮತ್ತು ನಾಗವಲ್ಲಿ ಬೆಟ್ಟ ಎಂಬ ದೊಡ್ಡ ಬೆಟ್ಟದ ಗುಹೆಗಳು ಹೊಂದಿರುವ ಮತ್ತು ಬೆಟ್ಟದ ಮೇಲಿನ ಒಂದು ದೇವಾಲಯವಿದೆ.

ಬಾಗೇಪಲ್ಲಿ

ಬಾಗೇಪಲ್ಲಿ ಪಟ್ಟಣವು ಚಿಕ್ಕಬಳ್ಳಾಪುರ ಜಿಲ್ಲೆಯ ಒಂದು ಟೌನ್ ಮುನಿಸಿಫಲ್ ಕೌನ್ಸಿಲ್ ಹೂಂದಿರುತ್ತದೆ. ಬಾಗೇಪಲ್ಲಿಯು ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ-7 ರಲ್ಲಿ ಬೆಂಗಳೂರಿನ ಉತ್ತರ ದಿಕ್ಕಿಗೆ 100 ಕಿ.ಮೀ. ಅಂತರದಲ್ಲಿದೆ. ಈ ಭಾಗವು ದಕ್ಷಿಣ ಭಾರತದ ಅಂಧ್ರಪದೇಶದ ರಾಯಲಸೀಮಾ ರಾಜ್ಯದ ದಕ್ಷಿಣ ಭಾಗದಲ್ಲಿ ಇರುತ್ತದೆ. ಈ ಭಾಗದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ 550 ಮಿ.ಮೀ. ಮಳೆಯಾಗುತ್ತಿದ್ದು, ನಿರಂತರ ಬರಗಾಲಕ್ಕೆ ತುತ್ತಾಗುವ ತಾಲ್ಲೂಕಾಗಿದೆ.

ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ನಗರವು ಕರ್ನಾಟಕ ರಾಜ್ಯದಲ್ಲಿ ಹೊಸದಾಗಿ ರಚಿಸಿದ ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾ ಪ್ರಧಾನ ಕಾರ್ಯಸ್ಥಾನವಾಗಿದೆ. ಈ ನಗರಕ್ಕೆ 3 ಕಿ.ಮೀ.ದೂರದಲ್ಲಿ ಮುದ್ದೇನಹಳ್ಳಿ ಗ್ರಾಮ ಇದ್ದು, ಈ ಗ್ರಾಮವು ಖ್ಯಾತ ಎಂಜಿನಿಯರ್ ಮತ್ತು ಮುತ್ಸದ್ದಿ ಸರ್ ಮೋಕ್ಷಗೊಂಡಂ ವಿಶ್ವೇಶ್ವರಯ್ಯ ಜನ್ಮಸ್ಥಳವಾಗಿದೆ. ಚಿಕ್ಕಬಳ್ಳಾಪುರ ತಾಲ್ಲೂಕು ಆಧುನಿಕ ಕೃಷಿಯ ಪ್ರದೇಶವಾಗಿದ್ದು, ರೇಷ್ಮೆ, ದ್ರಾಕ್ಷಿ ಮತ್ತು ತರಕಾರಿಗಳ ಉತ್ಪಾದನಾ ತಾಣವಾಗಿದೆ. ಈ ಪ್ರದೇಶವು ಉತ್ತಮ ಸಾರಿಗೆ ಸಂಪರ್ಕ ಹಾಗೂ ಹಲವಾರು ಶೈಕ್ಷಣಿಕ ಕೇಂದ್ರಗಳು ಹೂಂದಿದೆ. ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೂಂದುತ್ತಿರುವ ಚಿಕ್ಕಬಳ್ಳಾಪುರ ನಗರವು ಭವಿಷ್ಯದಲ್ಲಿ ಬೃಹತ್ ಬೆಂಗಳೂರಿನ ಒಂದು ಭಾಗವಾಗಿ ಬೆಳೆಯುವ ಸಾಧ್ಯತೆಗಳು ಇವೆ. ಈ ಭಾಗವು ಎಲ್ಲಾ ಕಾಲದಲ್ಲಿಯೂ ಒಂದು ಆಧುನಿಕ ಕೃಷಿ ಕೇಂದ್ರ ಎಂಬ ಹೆಸರಿಗೆ ಪಾತ್ರವಾಗಿದೆ.

ಶಿಡ್ಲಘಟ್ಟ

ಶಿಡ್ಲಘಟ್ಟವು ಚಿಕ್ಕಬಳ್ಳಾಪುರ ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರವಾಗಿದ್ದು, ಈಡೀ ರಾಜ್ಯದಲ್ಲಿ ರೇಷ್ಮೆ ಕೃಷಿ ಮತ್ತು ಉದ್ದಿಮೆಗೆ ಹೆಸರಾಗಿದೆ. ಇಲ್ಲಿನ ಜನರ ಮುಖ್ಯ ಆದಾಯ ರೇಷ್ಮೆ, ಗೃಹ ಕೈಗಾರಿಕೆಗಳನ್ನೇ ಆಧರಿಸಿದೆ. ಶಿಡ್ಲಘಟ್ಟ ತಾಲ್ಲೂಕಿನಲ್ಲಿ 243 ಗ್ರಾಮಗಳಿದ್ದು, ಶಿಡ್ಲಘಟ್ಟ ನಗರವು ತಾಲ್ಲೂಕಿನ ಪ್ರಧಾನ ಕೇಂದ್ರವಾಗಿದೆ. ನಗರದಲ್ಲಿ ಹೆಚ್ಚು ಪ್ರಮಾಣದಲ್ಲಿ ರೇಷ್ಮೆ ಕೃಷಿ ಆಧಾರಿತ ನೂಲು ತೆಗೆಯುವ ಗೃಹ ಕೈಗಾರಿಕೆಗಳಿದ್ದು, ತಮಿಳುನಾಡು, ಅಂಧ್ರಪ್ರದೇಶ, ಗುಜರಾತ್ ಮುಂತಾದ ರಾಜ್ಯಗಳಿಗೆ ರೇಷ್ಮೆ.