Close

ಆಸಕ್ತಿಯ ಸ್ಥಳಗಳು

ನಂದಿಬೆಟ್ಟ

ಬೆಂಗಳೂರಿನಿಂದ 60 ಕಿ.ಮೀ. ಉತ್ತರಕ್ಕೆ ನಂದಿಬೆಟ್ಟ ಇರುತ್ತದೆ. ಈ ಬೆಟ್ಟವನ್ನು ಹಿಂದೆ ನಂದಿದುರ್ಗ ಎಂದು ಕರೆಯುತ್ತಿದ್ದರು. ನಂದಿಬೆಟ್ಟವು ಸಮುದ್ರ ಮಟ್ಟದಿಂದ 1478 ಮೀ ಮೇಲೆ ಇರುತ್ತದೆ. ಈ ಗಿರಿಧಾಮದಲ್ಲಿ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ ಇದ್ದು, ಅವನು ಮತ್ತು ಅವನ ತಂದೆ ಹೈದರ್ ಅಲಿ ಇಲ್ಲಿ ಅವಳಿ ಕೋಟೆಗಳು ನಿರ್ಮಿಸಿರುತ್ತಾರೆ. ಇದೇ ಕೋಟೆಗಳನ್ನು ಸ್ಥಳೀಯ ಸಾಮಂತ ಮುಖ್ಯಸ್ಥರು ಕೂಡ ವಿಸ್ತರಿಸಿರುತ್ತಾರೆ. ಈ ಪ್ರದೇಶದ ಹಿತಕರ ವಾತಾವರಣದಿಂದ ಆಕರ್ಷಿತರಾಗಿದ್ದ ಬ್ರಿಟಿಷ್   ಅಧಿಕಾರಿಗಳು ಇಲ್ಲಿ ವಿಶಾಲವಾದ ಬಂಗಲೆಗಳು, ಉದ್ಯಾನವನಗಳನ್ನು ನಿರ್ಮಿಸಿದ್ದಾರೆ.  ಬೆಟ್ಟದ ಮೇಲಿರುವ ಟಿಪ್ಪು ಡ್ರಾಪ್ ಕೆಳಗೆ 60 ಮೀಟರ್ ಆಳವಾದ ಕಮರಿ ಇರುತ್ತದೆ. ಸಾಹಸ ಕ್ರೀಡಾ ಪ್ರೇಮಿಗಳು ಈ ಬೆಟ್ಟದ ಮೇಲಿರುವ ಪ್ರಾಚೀನ ಕಾಲದ ಯೋಗ ನಂದೀಶ್ವರ ದೇವಸ್ಥಾನದ ಪಕ್ಕದಿಂದ ಪ್ಯಾರಾಸೈಕ್ಲಿಂಗ್ ಗೆ ಪ್ರಯತ್ನಿಸಬಹುದು.

ನಂದಿಬೆಟ್

ಚಿಂತಾಮಣಿ

ಚಿಂತಾಮಣಿ ನಗರಕ್ಕೆ ಪ್ರಾಚೀನ ಕಾಲದ ಮರಾಠ ದಳವಾಯಿಯು ಚಿಂತಾಮಣಿ ಎಂದು ನಾಮಕರಣ ಮಾಡಿದ್ದಾರೆ. ಈ ನಗರದಲ್ಲಿದ್ದ ಚಿಂತಾಮಣಿ ರಾವ್ ಅವರ ಪ್ರಭಾವದಿಂದಲೂ ಈ ಹೆಸರು ಬಂದಿದೆ. ಈ ನಗರವು ಚಿನ್ನ ಮತ್ತು ಬೆಳ್ಳಿಯ ವ್ಯಾಪಾರ ಮತ್ತು ಅಗರಬತ್ತಿ (ಧೂಪದ್ರವ್ಯ) ಉದ್ಯಮವು ಪ್ರಸಿದ್ಧವಾಗಿದೆ. ಚಿಂತಾಮಣಿ ನಗರದಿಂದ ಸುಮಾರು 8 ಕಿ.ಮೀ. ದೂರದಲ್ಲಿರುವ ಮುರಗಮಲ್ಲ ದರ್ಗಾ ಇದೆ. ಇದು ರಾಜ್ಯಅತ್ಯಂತ ಹಳೆಯದಾದ ದರ್ಗಾಗಳಲ್ಲಿ ಒಂದಾಗಿದೆ. ಇಲ್ಲಿ ವಿಶೇಷವಾಗಿ ವಾರ್ಷಿಕ ಉರುಸ್ ಸಂದರ್ಭದಲ್ಲಿ ಸಾವಿರಾರು ಜನ ಎಲ್ಲಾ ಧರ್ಮಗಳ ಯಾತ್ರಾರ್ಥಿಗಳು ಶ್ರದ್ಧೆಯಿಂದ ಪಾಲ್ಗೂಳ್ಳುವುದು ಒಂದು ವಿಶೇಷ.

ಚಿಂತಾಮಣಿ

ಗುಮ್ಮನಾಯಕ ಕೋಟೆ

ಬಾಗೇಪಲ್ಲಿಯ ಪೂರ್ವ ದಿಕ್ಕಿಗೆ 16 ಕಿ.ಮೀ. ಅಂತರದಲ್ಲಿ ನೆಲೆಗೂಂಡಿರುವ ಗುಮ್ಮನಾಯಕನಕೋಟೆಯು ಸುಮಾರು 1350 ರಲ್ಲಿ ದಳವಾಯಿ ಗುಮ್ಮನಾಯಕ ಹಾಗೂ ಆತನ ಉತ್ತರಾಧಿಕಾರಿಗಳಿಂದ ನಿರ್ಮಾಣವಾಗಿರುತ್ತದೆ. ಇದು 150 ಅಡಿ ಏರುವ ಸುತ್ತಮುತ್ತಲಿನ ಗುಡ್ಡಗಾಡು ಪ್ರದೇಶದ ಮೇಲೆ ತನ್ನ ಕೋಟೆಯ ವೃತ್ತಾಕಾರದ ಬಂಡೆ ಗಮನ ಸೆಳೆದಿದೆ.

ಗುಮ್ಮನಾಯಕ ಕೋಟೆ

ಮುದ್ದೇನಹಳ್ಳಿ

ಒಬ್ಬ ದೂರದೃಷ್ಟಿ ಇಂಜಿನೀಯರ್, ರಾಜನೀತಿ ಮುತ್ಸದ್ದಿ ಮತ್ತು ಆಧುನಿಕ  ಕರ್ನಾಟಕ ರಾಜ್ಯದ ನಿರ್ಮಾತೃ ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮಸ್ಥಳವಾಗಿದೆ. ಇವರ ಮನೆಯನ್ನು ವಸ್ತುಸಂಗ್ರಾಹಲಯವನ್ನಾಗಿ ರೂಪಿಸಿದ್ದು, ಪ್ರವಾಸಿಗರು ಭೇಟಿ ನೀಡಬಹುದು. ನಂದಿ ಗ್ರಾಮವು ಭೋಗ ನಂದೀಶ್ವರ ದೇವಾಲಯದ ನೆಲೆಯಾಗಿದೆ. ಈ ದೇವಾಲಯವು ದ್ರಾವಿಡ ವಾಸ್ತು ಶೈಲಿಯಿಂದ  ನಿರ್ಮಾಣವಾಗಿರುವ  ಒಂದು ಅತ್ಯುತ್ತಮ ಉದಾಹರಣೆಯಾಗಿದೆ.

ಮುದ್ದೇನಹಳ್ಳಿ

ಜಕ್ಕಲಮಡುಗು ಡ್ಯಾಮ್

ಚಿಕ್ಕಬಳ್ಳಾಪುರ ನಗರಕ್ಕೆ 10 ಕಿ.ಮೀ. ದೂರದ ಕಣಿವೆ ಪ್ರದೇಶದಲ್ಲಿರುವ ಜಕ್ಕಲಮಡುಗು ಜಲಾಶಯವು ಚಿಕ್ಕಬಳ್ಳಾಪುರಕ್ಕೆ ಕುಡಿಯುವ ನೀರನ್ನು ಪೂರೈಕೆ ಮಾಡುವ ಮುಖ್ಯ ಮೂಲವಾಗಿದೆ.

ಜಕ್ಕಲಮಡುಗು ಡ್ಯಾಮ್

ನೆಹರು ಅತಿಥಿ ಗೃಹ

ಪಂಡಿತ್ ಜವಾಹರಲಾಲ್ ನೆಹರೂ ರವರು ನಂದಿಗಿರಿಧಾಮ್ಕೆಕ ಭೇಟಿ ನೀಡಿ ತಂಗಿದ್ದರು. ಇವರ ಸ್ಮರಣಾರ್ಥ ನೆಹರು ಅತಿಥಿಗೃಹವನ್ನು ನಿರ್ಮಾಣ ಮಾಡಿದ್ದು, ಇದು ತೋಟಗಾರಿಕೆ ಇಲಾಖೆಯ ಕಾರ್ಯನಿರ್ವಹಣೆಯಲ್ಲಿ ಇರುತ್ತದೆ. 1986ರಲ್ಲಿ ಎರಡನೇ ಸಾರ್ಕ್ ಶೃಂಗಸಭೆ ನಡೆದಿರುವ ಸ್ಥಳವಾಗಿದೆ.

ನೆಹರು ಅತಿಥಿ ಗೃಹ

ಟಿಪ್ಪುಡ್ರಾಪ್

ನಂದಿ ಬೆಟ್ಟದ ನೈಋತ್ಯ ಭಾಗದಲ್ಲಿರುವ ಒಂದು ಕಡಿದಾದ ಆಳವಾದ ಸ್ಥಳವನ್ನು ಟಿಪ್ಪು ಡ್ರಾಪ್ ಎಂದು ಹೆಸರಿಸಲಾಗಿದೆ. ಟಿಪ್ಪುವಿನ ಆಳ್ವಿಕೆಯಲ್ಲಿ ಮರಣ ದಂಡನೆಗೂಳಗಾದ ಖೈದಿಗಳನ್ನು ಈ ಜಾಗದಿಂದ ತಳ್ಳಿ ಸಾಯಿಸುತ್ತಿದ್ದರು.

ವಿಶ್ವೇಶ್ವರಯ್ಯ  ಸಮಾಧಿ

ಸರ್   ಎಂ.ವಿಶ್ವೇಶ್ವರಯ್ಯ  ರವರ ಸಮಾಧಿಯು ಚಿಕ್ಕಬಳ್ಳಾಪುರ ತಾಲ್ಲೂಕು, ಮುದ್ದೇನಹಳ್ಳಿಯಲ್ಲಿ ಇರುತ್ತದೆ.

ವಿಶ್ವೇಶ್ವರಯ್ಯ  ಸಮಾಧಿ

ಸುರಸದ್ಮಗಿರಿ ಬೆಟ್ಟ-ಗುಡಿಬಂಡೆ

ಗುಡಿಬಂಡೆ ನಗರದ ಪಶ್ಚಿಮ ದಿಕ್ಕಿನಲ್ಲಿ ಸುರಸದ್ಮಗಿರಿ ಬೆಟ್ಟವು  ಇದೆ. ಈ ಐತಿಹಾಸಿಕ ಪ್ರದೇಶದಲ್ಲಿ ಆ ಕಾಲದ ಪಾಳ್ಯಾಗಾರ ಬೈರೇಗೌಡ ನು ಆಳುತ್ತಿದ್ದು, ಇಲ್ಲಿ ಕೋಟೆಯನ್ನು ಸಹ ನಿರ್ಮಿಸಿರುತ್ತಾನೆ.

ಸುರಸದ್ಮಗಿರಿ ಬೆಟ್

ಶ್ರೀನಿವಾಸ ಸಾಗರ ಕೆರೆ

ಚಿಕ್ಕಬಳ್ಳಾಪುರ-ಗೌರಿಬಿದನೂರು ರಸ್ತೆಯಲ್ಲಿ ಸುಮಾರು 8 ಕಿ.ಮೀ. ಅಂತರದಲ್ಲಿರುವ ಒಂದು ಸುಂದರವಾದ ಜಲಾಶಯವಾಗಿದೆ.

ಶ್ರೀನಿವಾಸ ಸಾಗರ ಕೆರೆ