Close

ಧಾರ್ಮಿಕ ಸ್ಥಳಗಳು

ರಂಗಸ್ಥಳ:

ಚಿಕ್ಕಬಳ್ಳಾಪುರ-ಗೌರಿಬಿದನೂರು ರಸ್ತೆಯಲ್ಲಿ ರಂಗಸ್ಥಳದಲ್ಲಿ ಸ್ಥಾಪಿಸಲ್ಪಟ್ಟಿರುವ ವಿಜಯನಗರ ಶೈಲಿಯಲ್ಲಿ ಭಗವಾನ್ ರಂಗನಾಥ (ವಿಷ್ಣು) ಒಂದು ಸುಂದರ ದೇವಾಲಯವು ನಿರ್ಮಾಣವಾಗಿರುತ್ತದೆ.

ರಂಗಸ್ಥಳ-ದೇವಸ್ಥಾನ

ಕೈವಾರ:

ಮಹಾಭಾರತದಲ್ಲಿ ಏಕಚಕ್ರಪುರವೆಂದು ಪ್ರಸಿದ್ಧಿಯಾಗಿರುವ ಮತ್ತು ಪಾಂಡವರು ತಮ್ಮ ಅಜ್ಞಾತವಾಸದ ಸಮಯದಲ್ಲಿ ವಾಸಿಸಿದ್ದ ಸ್ಥಳವಾಗಿದೆ ಎಂಬುದು ಕೈವಾರ ನಗರದ ಹಿನ್ನೆಲೆ. ಪಾಂಡವ ಸಹೋದರರಲ್ಲಿ ಒಬ್ಬನಾದ ಭೀಮನು ಜನತೆಯನ್ನು ಹಿಂಸಿಸುತ್ತಿದ್ದ ಅಸುರನಾದ ಬಕಾಸುರನನ್ನು ಕೂಂದಿರುವ ಸ್ಥಳವಾಗಿದೆ. ಪುರಾಣಗಳಲ್ಲಿ ಇರುವಂತೆ ಕೈವಾರ ಬೆಟ್ಟದ ಸಮೀಪದ ಗುಹೆಯ ಸಮೀಪದಲ್ಲಿ ಶಿವರಾತ್ರಿ ಆಚರಣೆ ಸಂದರ್ಭದಲ್ಲಿ ರಕ್ತ ಹನಿಹನಿಯಾಗಿರುವ ರಾಕ್ಷಸನ ಕಳೇಬರವನ್ನು ಒಳಗೊಂಡಿರುತ್ತದೆ ಎಂಬ ನಂಬಿಕೆ ಇದೆ. ಕೈವಾರದ ಬಳಿ ಸಂಗೀತ ಕಾರಂಜಿಗಳಿರುವ ಉದ್ಯಾನವನ ಇದ್ದು, ಈ ಉದ್ಯಾನವನದಲ್ಲಿ 5 ಕುಟೀರಗಳಿದ್ದು, ಇವುಗಳನ್ನು ಪಂಚ ಪಾಂಡವರ ಹೆಸರಿನಲ್ಲಿರುತ್ತವೆ. ಇಲ್ಲಿ ಅಮರನಾರಾಯಣ ಮತ್ತು ಭೀಮೇಶ್ವರ ದೇವಾಲಯಗಳು ಹಾಗೂ ಯೋಗಿ ನಾರಾಯಣ ಆಶ್ರಮವು ಭೇಟಿ ಯೋಗ್ಯವಿರುವ ಸ್ಥಳಗಳಾಗಿವೆ.

ಕೈವಾರ

ಬೋಗನಂದೀಶ್ವರ ದೇವಾಲಯ:

ನಂದಿ ಗ್ರಾಮದಲ್ಲಿ ಸುಮಾರು ಕ್ರಿ.ಸ.806 ರಲ್ಲಿ ನಿರ್ಮಾಣವಾಗಿರುವ ಬೋಗನಂದೀಶ್ವರ ದೇವಾಲಯವು ದ್ರಾವಿಡ ಶೈಲಿಯಲ್ಲಿದ್ದು, ರತ್ನಾವಳಿ ರಾಜವಂಶದ ಬಾಣನಿಂದ ನಿರ್ಮಿಸಲ್ಪಟಿರುತ್ತದೆ. ಬೋಗನಂದೀಶ್ವರ ದೇವಾಲಯವು ಪ್ರಾಚೀನ ವಾಸ್ತುಶಿಲ್ಪಕ್ಕೆ ಹೆಸರಾಗಿದ್ದು, ಇದಕ್ಕೆ ಹೂಂದಿಕೊಂಡಂತೆ ಶ್ರೀ ಅರುಣಾಚಲೇಶ್ವರ ದೇವಾಲಯವನ್ನು ಬಳಪದ ಕಲ್ಲಿನಿಂದ ನಿರ್ಮಿಸಲಾಗಿದೆ. ಈ ದೇವಾಲಯಗಳಲ್ಲಿ ಗಂಗ, ಚೋಳರು ಮತ್ತು ಹೊಯ್ಸಳ ವಾಸ್ತುಶೈಲಿಯನ್ನು ಕಾಣಬಹುದು.

ಬೋಗನಂದೀಶ್ವರ ದೇವಾಲಯ

ಪಾಪಾಗ್ನಿ ಮಠ ಚಿಕ್ಕಬಳ್ಳಾಪುರ:

ಚಿಕ್ಕಬಳ್ಳಾಪುರ ನಗರದ ಹೂರವಲಯದಲ್ಲಿ ಸ್ಕಂದಗಿರಿ ಬೆಟ್ಟಗಳ ಮಡಿಲಲ್ಲಿ ನಿರ್ಮಿಸಲ್ಪಟ್ಟಿರುವ ಪಾಪಾಗ್ನಿ ಮಠವು ಒಂದು ಪ್ರಾಚೀನ ಕಾಲದ ಪುರಾತನ ವಾದ ಮಠವಾಗಿರುತ್ತದೆ.

ಪಾಪಾಗ್ನಿ ಮಠ ಚಿಕ್ಕಬಳ್ಳಾಪುರ

ಯೋಗನಂದೀಶ್ವರ ದೇವಾಲಯ:

ನಂದಿ ಗಿರಿಧಾಮದ ಶಿಖರದಲ್ಲಿ ನಿರ್ಮಾಣವಾಗಿರುವ ಯೋಗನಂದೀಶ್ವರ ದೇವಾಲಯವು ದ್ರಾವಿಡನ್ ಮತ್ತು ಚೋಳ ಶೈಲಿಯ ವಾಸ್ತುಶಿಲ್ಪ ವಿನ್ಯಾಸವನ್ನು ಒಳಗೂಂಡಿದೆ. ಈ ದೇವಾಲಯದ ದ್ವಾರಪಾಲಕ ಪ್ರತಿಮೆಗಳನ್ನು ಶ್ರೀ ಕೇಷ್ಣದೇವರಾಯನು ದಾನವಾಗಿ ನೀಡಿರುತ್ತಾನೆ. ದೇವಾಲಯದ ಹೊರ ಗೋಡೆಯ ಶಾಸನಗಳು ವಿವರಿಸಿರುವಂತೆ ಮೂಗಲರ ಆಳ್ವಿಕೆಯಲ್ಲಿ ಈ ದೇವಾಲಯವನ್ನು ಸಾಂಭಾಜಿಯ ಮಗನಾದ ಛತ್ರಪತಿ ಶಿವಾಜಿಯು ಆಕ್ರಮಿಸಿಕೊಂಡಿದ್ದನಂತೆ. ನಂದಿ ಗಿರಿಧಾಮದ ಕಾಲುನಡಿಗೆ ದಾರಿಯಲ್ಲಿ ಸುಮಾರು 1397 ರಲ್ಲಿ ದೇವರಾಯನು ವೀರಭಧ್ರ ದೇವಾಲಯವನ್ನು ನಿರ್ಮಿಸಿದ್ದು, ಈ ದೇವಾಲಯವು ಒಂದು ಅತ್ಯಂತ ಅಪೂರ್ವ ಐತಿಹಾಸಿಕ ಸ್ಮಾರಕವಾಗಿದೆ.

ಯೋಗನಂದೀಶ್ವರ ದೇವಾಲಯ