Close

ನಂದಿಬೆಟ್ಟ

ನಿರ್ದೇಶನ

ಬೆಂಗಳೂರಿನಿಂದ 60 ಕಿ.ಮೀ. ಉತ್ತರಕ್ಕೆ ನಂದಿಬೆಟ್ಟ ಇರುತ್ತದೆ. ಈ ಬೆಟ್ಟವನ್ನು ಹಿಂದೆ ನಂದಿದುರ್ಗ ಎಂದು ಕರೆಯುತ್ತಿದ್ದರು. ನಂದಿಬೆಟ್ಟವು ಸಮುದ್ರ ಮಟ್ಟದಿಂದ 1478 ಮೀ ಮೇಲೆ ಇರುತ್ತದೆ. ಈ ಗಿರಿಧಾಮದಲ್ಲಿ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ ಇದ್ದು, ಅವನು ಮತ್ತು ಅವನ ತಂದೆ ಹೈದರ್ ಅಲಿ ಇಲ್ಲಿ ಅವಳಿ ಕೋಟೆಗಳು ನಿರ್ಮಿಸಿರುತ್ತಾರೆ. ಇದೇ ಕೋಟೆಗಳನ್ನು ಸ್ಥಳೀಯ ಸಾಮಂತ ಮುಖ್ಯಸ್ಥರು ಕೂಡ ವಿಸ್ತರಿಸಿರುತ್ತಾರೆ. ಈ ಪ್ರದೇಶದ ಹಿತಕರ ವಾತಾವರಣದಿಂದ ಆಕರ್ಷಿತರಾಗಿದ್ದ ಬ್ರಿಟಿಷ್   ಅಧಿಕಾರಿಗಳು ಇಲ್ಲಿ ವಿಶಾಲವಾದ ಬಂಗಲೆಗಳು, ಉದ್ಯಾನವನಗಳನ್ನು ನಿರ್ಮಿಸಿದ್ದಾರೆ.  ಬೆಟ್ಟದ ಮೇಲಿರುವ ಟಿಪ್ಪು ಡ್ರಾಪ್ ಕೆಳಗೆ 60 ಮೀಟರ್ ಆಳವಾದ ಕಮರಿ ಇರುತ್ತದೆ. ಸಾಹಸ ಕ್ರೀಡಾ ಪ್ರೇಮಿಗಳು ಈ ಬೆಟ್ಟದ ಮೇಲಿರುವ ಪ್ರಾಚೀನ ಕಾಲದ ಯೋಗ ನಂದೀಶ್ವರ ದೇವಸ್ಥಾನದ ಪಕ್ಕದಿಂದ ಪ್ಯಾರಾಸೈಕ್ಲಿಂಗ್ ಗೆ ಪ್ರಯತ್ನಿಸಬಹುದು.

ಫೋಟೋ ಗ್ಯಾಲರಿ

  • ನಂದಿ ಬೆಟ್ಟಗಳು
  • ನಂದಿ-ಬೆಟ್ಟಗಳು

ತಲುಪುವ ಬಗೆ :

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿ, ನಂದಿ ಬೆಟ್ಟದಿಂದ 38 ಕಿಮೀ ದೂರದಲ್ಲಿದೆ. ಅಲ್ಲಿಂದ ನಿಮ್ಮ ಖಾಸಗಿ ವಾಹನದಲ್ಲಿ ನೀವು ತಲುಪಬಹುದು.

ಚಿಕ್ಕಬಳ್ಳಾಪುರ ನಿಲ್ದಾಣ ಅಥವಾ ಬೆಂಗಳೂರು ನಿಲ್ದಾಣವನ್ನು ತಲುಪಿ. ನೀವು ನಂದಿ ಬೆಟ್ಟಗಳಿಗೆ ವಾಹನವನ್ನು ತಲುಪಬಹುದು.

ಚಿಕಾಬಲ್ಲಪುರಕ್ಕೆ ಆಗಾಗ ಬಸ್ಗಳು ಲಭ್ಯವಿದೆ. ಅಲ್ಲಿಂದ ನೀವು ವಾಹನ ಮೂಲಕ ತಲುಪಬಹುದು.