ಭೂಮಿ ಸೇವೆಗಳು

ಭೂಮಿ – ಸಮಗ್ರ ಭೂದಾಖಲೆಗಳ ನಿರ್ವಹಣೆಯ ಗಣಕ ವ್ಯವಸ್ಥೆ

ಭೂಮಿ ಯೋಜನೆಯು ಕರ್ನಾಟಕ ರಾಜ್ಯ ಸರ್ಕಾರದ ಭೂದಾಖಲೆಗಳ ನಿರ್ವಹಣೆಯ ಒಂದು ಪ್ರಮುಖ ಯೋಜನೆಯಾಗಿದೆ. ಈ ಯೋಜನೆಯನ್ನು 2000ನೇ ಇಸವಿಯಲ್ಲಿ ಪ್ರಾರಂಭಿಸಲಾಯಿತು. ಈ ಯೋಜನೆ ಯಡಿಯಲ್ಲಿ, ಎಲ್ಲಾ ಕೈಬರಹದ ಪಹಣಿಗಳನ್ನು ಡಾಟಾ ನಮೂದಿಸುವ ಮುಖಾಂತರ ಗಣಕೀಕರಣಗೊಳಿಸಿ ಗಣಕೀಕೃತ ಪಹಣಿಗಳನ್ನು ಕಿಯಾಸ್ಕ್ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ವಿತರಿಸಲು ಪ್ರಾರಂಭಿಸಲಾಯಿತು. ಭೂದಾಖಲೆಗಳ ದತ್ತಾಂಶವನ್ನು ಉಪಯೋಗಿಸಿ ಪಹಣಿ ಯಲ್ಲಾಗುವ ಮಾಲೀಕತ್ವ ಬದಲಾವಣೆ ಅಥವಾ ಇನ್ಯಾವುದೇ ಬದಲಾವಣೆಗಳನ್ನು ಕೆ ಎಲ್ ಆರ್ ಕಾಯ್ದೆ ಪ್ರಕಾರ ಮ್ಯುಟೇಶನ್ ಮುಖಾಂತರ ನಿರ್ವಹಿಸಲು ಸಹಾ ಪ್ರಾರಂಭಿಸಲಾಯಿತು. ಇದಕ್ಕಾಗಿ ರಾಜ್ಯದ ಎಲ್ಲಾ 176 ತಾಲ್ಲೂಕುಗಳು, 1 ಹೆಚ್ಚುವರಿ ತಾಲ್ಲೂಕು ಹಾಗೂ 26 ವಿಶೇಷ ತಾಲ್ಲೂಕುಗಳಲ್ಲಿ ಭೂಮಿ ಬ್ಯಾಕ್ ಆಫೀಸ್ ಗಳನ್ನು ಸ್ಥಾಪಿಸಲಾಗಿದೆ.ಪ್ರತಿಯೊಂದು ಬ್ಯಾಕ್ ಆಫೀಸ್ ನಲ್ಲಿ ಎಲ್ ಆರ್ ಕಿಯಾಸ್ಕ್ ಹಾಗೂ ಅರ್ಜಿ ಕಿಯಾಸ್ಕ್ ಕೌಂಟರ್ ಗಳನ್ನು ಸಹ ಸ್ಥಾಪಿಸಲಾಗಿದೆ. 

ಭೇಟಿ: https://landrecords.karnataka.gov.in

ಜಿಲ್ಲಾಡಳಿತ ಭವನ ಸಮುಚ್ಚಯ

ಜಿಲ್ಲಾಡಳಿತ ಭವನ ಸಮುಚ್ಚಯ, ಶಿಡ್ಲಘಟ್ಟ ರಸ್ತೆ ಚಿಕ್ಕಬಳ್ಳಾಪುರ - 562101.
ಸ್ಥಳ : ಜಿಲ್ಲಾಡಳಿತ ಭವನ | ನಗರ : ಚಿಕ್ಕಬಳ್ಳಾಪುರ | ಪಿನ್ ಕೋಡ್ : 562101

ಜಿಲ್ಲಾ ಅಂತರ್ಜಾಲ ತಾಣ ಎಲ್ಲಾ ವಿಷಯಗಳು ಜಿಲ್ಲಾ ಆಡಳಿತ ಕ್ಕೆ ಮಾಲೀಕತ್ವ ಹೊಂದಿರುತ್ತದೆ

© ಚಿಕ್ಕಬಳ್ಳಾಪುರ ಜಿಲ್ಲೆ , Developed and hosted by National Informatics Centre,Ministry of Electronics & Information Technology, Government of India

ಕೊನೆಯದಾಗಿ ನವೀಕರಿಸಲಾಗಿದೆ: 15.02.2019