Close

ನಾಡಕಛೇರಿ ಸೇವೆಗಳು

ಸಾರ್ವಜನಿಕರಿಗೆ ಅಗತ್ಯವಿರುವ ಕಂದಾಯ ಇಲಾಕೆಯ ಹಲವು ಸೇವೆಗಳನ್ನು ಪಡೆಯಲು ಅನುಕೂಲವಾಗುವಂತೆ, ನೆಮ್ಮದಿ ಯೋಜನೆಯನ್ನು 2006 ರಲ್ಲಿ ಸಾರ್ವಜನಿಕಖಾಸಗಿ ಪಾಲುದಾರಿಕೆಯಲ್ಲಿ ಆಡಳಿತ ಇಲಾಖೆಯ ಸಹಯೋಗದೊಂದಿಗೆ 890 ನೆಮ್ಮದಿ ಕೇಂದ್ರಗಳಳನ್ನು ರಾಜ್ಯಾದ್ಯಂತ ಪ್ರಾರಂಭಿಸಲಾಯಿತು. ಆದರೆ, ಖಾಸಗಿ ಪಾಲುದಾರರ ನಿಯಂತ್ರಣದ ಕೊರತೆಯೂ ಸೇರಿದಂತೆ ವಿವಿಧ ಸಮಸ್ಯೆಗಳಿಂದಾಗಿ ನೆಮ್ಮದಿ ಯೋಜನೆಯನ್ನು ಸರ್ಕಾರವು ಕಂದಾಯ ಇಲಾಖೆಗೆ ವರ್ಗಾಯಿಸಲಾಯಿತು. ಇದರ ಮೂಲಕ ಸರ್ಕಾರದ ಎಲ್ಲಾ ಕಂದಾಯ ಸೇವೆಗಳನ್ನು ಹೋಬಳಿ ಮಟ್ಟದಲ್ಲಿ ಗ್ರಾಮೀಣ ಪ್ರದೇಶದ ನಾಗರೀಕರಿಗೆ ಪಾರದರ್ಶಕ, ವಿಶ್ವಾಸರ್ಹ ಹಾಗೂ ಕೈಗೆಟಕುವ ವಿಧಾನದ ಮೂಲಕ ನೀಡಲು ಅಟಲ್ ಜೀ ಜನಸ್ನೇಹಿ ಕೇಂದ್ರವನ್ನು ಸರ್ಕಾರದ ಆದೇಶ ಅನ್ವಯ ದಿನಾಂಕ: 18.12.2012 ರಂದು ಪ್ರಾರಂಭಿಸಲಾಗಿದ್ದು, ಅದರಂತೆ, ಸದರಿ ಕೇಂದ್ರಗಳು ದಿನಾಂಕ: 25.12.2012 ರಿಂದ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿವೆ.

ಭೇಟಿ: https://nadakacheri.karnataka.gov.in/AJSK/

District Office, Chikkaballapura

DC Office, Chikkaballapura
ನಗರ : Chikkaballapura | ಪಿನ್ ಕೋಡ್ : 562101