Close

ನಂದಿ ಸಂತೆ

ಪ್ರಾರಂಭಿಸಿ : 01/09/2018 | ಕೊನೆ : 31/10/2018

ಕಾರ್ಯಕ್ರಮ ವಿವರಣೆ

ಚಿಕ್ಕಬಳ್ಳಾಪುರ ಜಿಲ್ಲೆಯು 2007 ಆಗಸ್ಟ್ 23 ರಂದು ಕೋಲಾರ ಜಿಲ್ಲೆಯಿಂದ ವಿಭಜಿತಗೊಂಡು ಅಸ್ತಿತ್ವಕ್ಕೆ ಬಂದ ಜಿಲ್ಲೆಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯು 4254 ಚ.ಕಿ.ಮೀ ವಿಸ್ತೀರ್ಣ ಹೊಂದಿದ್ದು, ಭೌಗೋಳಿಕವಾಗಿ ಕರ್ನಾಟಕ ರಾಜ್ಯದಲ್ಲಿ 8ನೇ ಸ್ಥಾನ ಪಡೆದಿದೆ. ಜಿಲ್ಲೆಯಲ್ಲಿ ಒಟ್ಟು 6 ತಾಲ್ಲೂಕುಗಳಿದ್ದು, ತನ್ನದೇ ಆದ ಶ್ರೀಮಂತವಾದ ಐತಿಹಾಸಿಕ, ಸಾಂಸ್ಕøತಿಕ, ಧಾರ್ಮಿಕ ಹಾಗೂ ಪ್ರಾಕೃತಿಕ ಪರಂಪರೆಯನ್ನು ತನ್ನ ಮಡಿಲಲ್ಲಿ ಹುದುಗಿಸಿಕೊಂಡಿದೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಗಿರಿಧಾಮವು ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ರಾಜ್ಯದ ರಾಜಧಾನಿಗೆ ಹತ್ತಿರವಾಗಿರುವುದರಿಂದ, ವಾರಾಂತ್ಯಕ್ಕೆ ಸದರಿ ಗಿರಿಧಾಮಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುವುದರಿಂದ, ನಮ್ಮ ಜಿಲ್ಲೆಯಲ್ಲಿ ಉತ್ಪಾದಿಸಿರುವ ಉತ್ಪನ್ನಗಳು ಹಾಗೂ ವಿಶಿಷ್ಟವಾದ ಕಲೆಗಳನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸುವ ಮೂಲಕ ಸ್ಥಳೀಯರಿಗೆ ಉತ್ತೇಜನ ನೀಡಲು, ಉದ್ಯೋಗಾವಕಾಶ ಕಲ್ಪಿಸಲು ಹಾಗೂ ಪ್ರವಾಸಿಗರಿಗೆ ಜಿಲ್ಲೆಯ ವೈಶಿಷ್ಟತೆಯ ಬಗ್ಗೆ ಪರಿಚಯಿಸಲು ಜಿಲ್ಲಾಡಳಿತದ ವತಿಯಿಂದ ನಂದಿ ಸಂತೆಯನ್ನು ಆಯೋಜಿಸಲಾಗಿದೆ

ಫೇಸ್ ಬುಕ್ ಲಿಂಕ್

ನಂದಿ ಸಂತೆ_1

ಚಿಕ್ಕಬಳ್ಳಾಪುರ